ಮನಸೇ ಓ ಮನಸೇ
ಮನಸೇ ನೀನೊಂದು ಕಣ್ಣಿಗೆ ಕಾಣದ ಮಾಯೆ ..............
ಎಲ್ಲರನೂ ಕಾಡುವೆ ನೀ , ಹೀಗೇ ನೀ ಎಂದು ನಾ ಅರಿಯೆ
ಒಮ್ಮೆ ನಗಿಸುವೆ,ಇನ್ನೊಮ್ಮೆ ಅಳಿಸುವೆ, ಏಕೆ ನೀ ಹೀಗೆ ?
ನಾ ಸೋತಿರುವೆ, ನಿನ್ನ ಅರಿಯುವುದಾದರು ನಾ ಹೇಗೆ ?
ಮನಸೇ ಓ ಮನಸೇ... ನೀ ಅತಿ ಮೃದು ಮಧುರ
ನಿನ್ನಿಂದಲೇ ಉಗಮ ಬದುಕಿನ ಎಲ್ಲಾ ಆತುರ, ಕಾತುರ
ನಮ್ಮೆಲ್ಲಾ ಒಳಿತು-ಕೆಡಕುಗಳನು ಅರಿತಿರುವೆ ಸರಿಯಾಗಿ ನೀ .............
ಒಮ್ಮೆ ಮುಕಾಗುವೆ, ಇನ್ನೊಮ್ಮೆ ಅರಿವು ಮೂಡುವೆ ಯಾಕಾಗಿ ಹೀಗೆ ನೀ?
ಎಲ್ಲಾ ಸಾಧನೆಗೂ ನೀನೆ ಸ್ಪೂರ್ತಿ, ನಿನ್ನಿಂದಲೇ ಬದುಕು.....
ನೀ ಕುರುಡಾದರೆ ನಶ್ವರವಾಗುವುದು ಈ ಅಮೂಲ್ಯ ಬದುಕು
ಸ್ವರ್ಗವೇ ಅಂಗೈಯಲ್ಲಿ ಇದ್ದಂತೆ ನೀ ನಲಿದರೆ.........
ನೀ ಸಹಿಸಲಾರೆ ತೊಳಲಾಟವ ತುಸು ನೋವಾದರೆ
ಮನಸೇ ನಿನ್ನ ರೂಪು-ರೇಖೆಗಳು ಹಲವು-ಹಲವಾರು..........
ಒಬ್ಬೊಬ್ಬರಲಿ ಒಂದು ರೀತಿ, ಆದರೂ ನಾ ಅರಿವೆ ಕೆಲವಾರು
ನಿನ್ನನ್ನು ಸದಾ ಸುಸ್ಥಿತಿಯಲ್ಲಿ ಇಡುವುದೇ ನನ್ನ ಆತುರ
ಆದರೆ ಬದುಕಿನ ಜಂಜಾಟದಲ್ಲಿ ಅದಾಗಿದೆ ದುಸ್ತರ ......

power of mind is amazing
ReplyDelete