ಪ್ರೀತಿಯೇ ಇಲ್ಲದ ಮೇಲೆ.....................
ಬದುಕಿಗೆ ನೂರೆಂಟು ಸಂಬಂಧಗಳು ಬೇಕು
ಸಂಬಂಧಗಳ ನಡುವೆ ಪ್ರೀತಿ ಇರಬೇಕು
ಹುಟ್ಟಿನೊಂದಿಗೆ ಸಂಬಂಧಗಳ ಅಂಟಿಕೊಂಡು ಬರುವೆವು
ಹಾಗೆ ಅವುಗಳೊಂದಿಗೇ ಅಂತ್ಯಕಾಣುವೆವು
ನಡುವೆ ಬರುವ ಸಂಬಂಧಗಳು ಎಷ್ಟೋ
ಅವುಗಳಲಿ ಕೊನೆವರೆಗೂ ಉಳಿಯುವವು ಇನ್ನೆಷ್ಟೋ
ಸಂಬಧಗಳಿಂದ ಪಡುವ ಸುಖ-ದುಃಖಗಳು ಅದಿನ್ನೆಷ್ಟೋ
ಸಂಬಧಗಳ ನಡುವೆ ಪ್ರೀತಿಯೆಂಬುದು ಅಮೂಲ್ಯ ರತ್ನ
ಅದಕಾಗಿ ನಾವು ಪಡಲೇ ಬೇಕು ಯತ್ನ
ಎಲ್ಲರೊಡನೆ ಒಳ್ಳೆಯ ಸಂಬಧಗಳ ಕಟ್ಟಿಕೊಳ್ಳೋಣ
ಪ್ರೀತಿಯಿಂದ ಪೋಷಿಸಿ ಅವುಗಳ ಉಳಿಸಿಕೊಳ್ಳೋಣ
- ಪ್ರೀತಿಯಿಂದ ಯಮುನ

ಪ್ರೀತಿ ನಿರಂತರ
ReplyDelete