Thursday, 27 September 2012

Kannada kavana about dreams

ಕನಸುಗಳು ಸುಂದರ ಲೋಕದ ಕಲ್ಪನೆಗಳು..........
ಅಲ್ಲಿ ನಮ್ಮ ಆಸೆ-ಆಕಾಂಕ್ಷೆಗಳೇ ಸ್ವತಂತ್ರ ಹಕ್ಕಿಗಳು 

 ಹಕ್ಕಿಗಳ ಸ್ವಚಂದ ಹಾರಾಟಕ್ಕೆ ಎಲ್ಲೆಯೇ ಇಲ್ಲ 
ಏಕೆಂದರೆ ಕನಸುಗಳಿರದ ಬದುಕೇ ಇಲ್ಲ ........

ಕನಸುಗಳು ಭಾವನಾಲೋಕದ ಪ್ರತಿಬಿಂಬ......................
ರೆಪ್ಪೆ ಮುಚ್ಚಿದೊಡನೆಯೇ ಅವುಗಳದೇ ಹಾರಾಟ ಕಣ್ತುಂಬ

ಬದುಕಿನ ಪಯಣದಿ ಉಜ್ವಲ ಭವಿಷ್ಯದ ಕನಸು ಕಾಣಬೇಕು 
ಅವುಗಳ ಸಾಕಾರಗೊಳಿಸಲು ಪರಿಶ್ರಮ ಪಡಲೇ ಬೇಕು 

ಎಂದಿಗೂ ಕನಸುಗಳು ಬಡಿದೆಬ್ಬಿಸಬೇಕು ನಮ್ಮನು ನಿದ್ದೆಯಲ್ಲೂ 
ಇಲ್ಲವಾದಲ್ಲಿ ಅವುಗಳೇ ಆಗುವವು ನಿದ್ದೆಯ ಗುಳಿಗೆಗಳೆಲ್ಲಲ್ಲೂ   

1 comment: