ಅಮ್ಮ ..
ಅಮ್ಮ ನಿನ್ನ ಬಣ್ಣಿಸುವ ಶಕ್ತಿ - ಸಾಮರ್ತ್ಯ ನನಗಿಲ್ಲಮ್ಮ .....................
ಪ್ರತಿಯೊಂದು ಜೀವಿಯ ಬೆಳವಣಿಗೆಯ ಆರಂಭ ನಿನ್ನ ಮಡಿಲಿನಲ್ಲಮ್ಮ
ನಿನ್ನೊಡಲಲಿ ನವಮಾಸ ಹೊತ್ತು , ಜನ್ಮ ನೀಡುವೆ ನಿನ್ನಾಸೆಯ ರೂಪಕೆ
ಪುನರ್ಜನ್ಮದ ಸಂಕಟ-ಆನಂದ ಪಡುವೆ, ತಾಯ್ತನದ ಹರಕೆಯ ಬಯಕೆಗೆ
ನೋವು - ನಲಿವಿನ ಕ್ಷಣಗಳಲಿ ಮೊದಲು ನೆನಪಾಗುವ ಪದವೇ ನೀ ಅಮ್ಮ
ಮಗಳಾಗಿ ಮಡದಿಯಾಗಿ ತಾಯಿಯಾಗಿ ಬಾಳ ಬೆಳಗಿಸುವವಳು ನೀನೆ ಅಮ್ಮ
ಅಕ್ಕರೆಯಿಂದ ಎಲ್ಲರನ್ನು ಪೋಷಿಸುವೆ ನಮ್ಮೆಲ್ಲರ ನೆರಳಾಗಿ ...........
ಸದಾ ಜೊತೆಗಿರುವೆ ನಮ್ಮೆಲ್ಲಾ ಸುಖ-ದುಃಖಗಳಲಿ ಕಣ್ ರೆಪ್ಪೆಯಾಗಿ
ಅಮ್ಮ ನೀನೊಂದು ಪ್ರೀತಿ, ಕರುಣೆ, ತ್ಯಾಗಗಳ ಸಾಗರ .............................
ನಿನ್ನೊಳಗೆ ಎಷ್ಟೇ ದುಃಖ-ದುಮ್ಮಾನಗಳಿದ್ದರು ನೀ ಆಗಿರುವೆ ಸದಾ ಪ್ರೀತಿಯ ಆಗರ
ನಿನ್ನ ಮಡಿಲಿನ ಆಶ್ರಯದಲ್ಲಿ ಮಲಗಿದರೆ ನನಗದೆ ಸ್ವರ್ಗ ಸೋಪಾನ....
ನಿನ್ನನ್ನು ಅತಿಯಾಗಿ ಕಾಡಿಬೇಡುವುದು ನನಗಿಷ್ಟ ನೀ ಬಯಸಿದರು ನನ್ನ ಜೋಪಾನ
ನಿನ್ನೊಲುಮೆ ಇಲ್ಲದೆ ಮನುಷ್ಯ ಜೀವನ ಅಪೂರ್ಣ ತಾಯೇ .................
ನಾ ಬಯಸುವೆ ನಿನ್ನ ಸಂಪೂರ್ಣ ಅನುಗ್ರಹದ ಛಾಯೆ .......................
.jpg)
ಅಮ್ಮ❤️...
ReplyDeleteಜಗತ್ತಿನಲ್ಲಿ ಅಮ್ಮನ ಪ್ರೀತಿಸದವರಾರು😍......
ಅಮ್ಮ ನಿನಗೆ ನಾ ಚಿರಋಣಿ🙏....
ಸೊಗಸಾದ ವರ್ಣನೆ ಯಮುನಾ 👌.....
ನಿನ್ನ ಇ ವರ್ಣನೆ ಮೆಚ್ಚದವರಾರು 👍...
Thank You....😊👍
Deleteಅಮ್ಮನಿಗಾಗಿ ಅರ್ಪಣೆ ...🥰
ReplyDelete👌👌👌
ReplyDelete👍👍
Delete