Friday, 8 May 2020

Kannada Kavana about Brother


ಅಣ್ಣನ ವರ್ಣನೆಯ ಬಣ್ಣನೆ 


 ಮನೆಯೆಂಬ ಮೊದಲ ಶಾಲೆಯ ಆತ್ಮೀಯ ಸಹಪಾಠಿ... 
ದೈವದ ಸೃಷ್ಟಿಯಲಿ ಈ ಅನುಬಂಧಕ್ಕೆ ಏನಿದೆ ಸರಿಸಾಟಿ 

 ಬಾಲ್ಯದ ಆಟ,ಓಡಾಟ,ಕಿತ್ತಾಟಗಳ ಸವಿನೆನಪುಗಳು ಉಂಟು ನಿನ್ನೊಡನೆ 
ಬೆಳೆದಂತೆಲ್ಲಾ ಪ್ರೀತಿಕೊಟ್ಟು ಆರೈಕೆಮಾಡುತ್ತಾ ನಿಂತೆ ನನ್ನೊಡನೆ ....

 ಒಂದೇ ಕರುಳ ಬಳ್ಳಿಯ ರಕ್ತಸಂಬಂಧಿ ನೀ ಸಹೋದರ ..... 
ಕುಟುಂಬವನು ನಲುಮೆಯಿಂದ ಪೋಷಿಸುತ್ತಿರುವ ಅನುರಾಗದಾಗರ 

 ಬೇಡಿದರು ಸಿಗದ ವರವಾಗಿ ನೀನಿರುವೆ ನನ್ನೀ ಜೀವಕೆ ......     
ನಿನ್ನಾಸರೆಯಲಿ ಜೊತೆಯಿರುವೆ ನಿನ್ನ ಸರಾಗ ಜೀವನ ಪಯಣಕೆ     

 ಎಲ್ಲರ ಒಳಿತನ್ನು ಬಯಸಿ  ಶ್ರಮಿಸುವ ನಾ ಕಂಡ ಸಹಜೀವಿ
ಜೀವನದಲಿ ನಗು-ನಗುತಾ ಆಗಿರು ನೀ ಸದಾ ಚಿರಂಜೀವಿ 

3 comments: