ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಿರು ಪರಿಚಯ
ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಮಧ್ಯ ಸುಬ್ರಹ್ಮಣ್ಯವೆಂದೆ ಖ್ಯಾತಿಯಾಗಿದೆ. ಶ್ರೀ ಕ್ಷೇತ್ರದ ದೇವಾಲಯದ ಗೋಪುರವು ದೂರದಿಂದಲೇ ಗೋಚರಿಸುತ್ತಾ, ಭಕ್ತರಿಗೆ ಭಯವನ್ನು ಹೋಗಲಾಡಿಸಿ ಅಭಯ ನೀಡುವಂತಿದೆ.
ಶಿವ ಪುತ್ರನಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಉತ್ತರದ ಹಿಮಾಲಯದಿಂದ ದಕ್ಷಿಣದ ಕಡೆಗೆ ಏಕೆ ಬಂದು ನೆಲೆಸಿದ ಎಂಬುದಕ್ಕೆ ಒಂದು ಅಧ್ಬುತ ಮಹಾ ಮಹಿಮಾ ಕತೆ ಇದೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಜನಿಸಿದ ಮತ್ತು ದಕ್ಷಿಣಕ್ಕೆ ಬಂದು ನೆಲೆಸಿದ ಕಾರಣ "ದುಷ್ಟ ಶಿಕ್ಷಣೆಗೆ - ಶಿಷ್ಟ ರಕ್ಷಣೆಗೆ ". ಶ್ರೀ ಘಾಟಿ ಕ್ಷೇತ್ರದ ಬಗ್ಗೆ ತಿಳಿಯಬೇಕಾದರೆ ಆದಿ ಸುಬ್ರಹ್ಮಣ್ಯನಾದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬಗ್ಗೆ ತಿಳಿಯ ಬೇಕು.
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಗೋಪುರ |
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜನನ:
ಒಮ್ಮೆ ಪರಶಿವನು ತ್ರಿಪುರಾಸುರನನ್ನು ಸಂಹರಿಸಿದನು. ನಂತರ ತ್ರಿಪುರಾಸುರನ ಮಕ್ಕಳಾದ ತಾರಕಾಸುರ, ಸಿಂಹವಕ್ರ, ಗಜಾಸ್ಯ, ಶೂರಪದ್ಮರು ಹದಿನಾಲ್ಕುಲೋಕಗಳನ್ನು ಪೀಡಿಸತೊಡಗಿದರು. ಈ ರಾಕ್ಷಸರ ಕಾಟ ತಾಳಲಾರದೆ ಎಲ್ಲರೂ ಬ್ರಹ್ಮದೇವನನ್ನು ಬೇಡಿಕೊಂಡರು ,ನಂತರ ಅವರೆಲ್ಲರೂ ಪರಿಹಾರಕ್ಕೆ ಶ್ರೀ ಹರಿಯ ಮೊರೆ ಹೊಕ್ಕರು. ಆಗ ವಿಷ್ಣುವು "ಪರಶಿವನು ಪಾರ್ವತಿಯನ್ನು ವಿವಾಹವಾಗಬೇಕು, ಅವರಿಗೆ ಜನಿಸಿದ ಮಗುವಿನಿಂದ ಈ ರಾಕ್ಷಸರ ಸಂಹಾರವೆಂದು " ಪರಿಹಾರ ಮಾರ್ಗವನ್ನು ಸೂಚಿಸಿದನು.
ಶ್ರೀ ವಿಷ್ಣುವು ದೇವತೆಗಳಿಗೆ ಪರಿಹಾರವನ್ನು ಸೂಚಿಸುತ್ತಿರುವುದು |
ನಂತರ ದೇವತೆಗಳು, ದಕ್ಷಯಜ್ಞದಲ್ಲಿ ಆಹುತಿಯಾದ ತನ್ನ ದಾಕ್ಷಾಯಣಿಯ ವಿರಹದಿಂದ ತಪದಲ್ಲಿ ಕುಳಿತ ಪರಶಿವನಲ್ಲಿ ಗಿರಿಜೆಯ ಮೇಲೆ ಪ್ರೀತಿ ಉಂಟು ಮಾಡಲು ಮನ್ಮಥನನ್ನು ಕಳಿಸಿದರು. ಮನ್ಮಥ ತನ್ನ ಪಂಚಬಾಣಗಳನ್ನು ಪ್ರಯೋಗಿಸಿ ಶಿವನ ಧ್ಯಾನವನ್ನು ಭಂಗಗೊಳಿಸಿ, ತಾನು ಶಿವನ ಕೋಪಕ್ಕೆ ಬಲಿಯಾಗಿ ಭಸ್ಮವಾದ. ನಂತರ ಶಿವ - ಪಾರ್ವತಿಯರ ಕಲ್ಯಾಣವು ನಡೆಯಿತು.
ಮನ್ಮಥನು ಶಿವನ ಮೇಲೆ ಪಂಚಬಾಣವನ್ನು ಪ್ರಯೋಗಿಸುತ್ತಿರುವುದು |
No comments:
Post a Comment